“ಸ್ವಾತಂತ್ರ್ಯ ಸಂಗ್ರಾಮದಿಂದ ಇಲ್ಲಿಯವರೆಗೆ ಮುಸ್ಲಿಮರ ಕೊಡುಗೆ ಅನನ್ಯ”
ಬಳ್ಳಾರಿ: ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ ಇಲ್ಲಿಯವರೆಗೆ ಮುಸ್ಲಿಮರು ದೇಶಕ್ಕಾಗಿ ತ್ಯಾಗ ಬಲಿದಾನ ಮಾಡುತ್ತಿದ್ದಾರೆ, ಅವರ ಕೊಡುಗೆಯೂ ದೊಡ್ಡದಾಗಿದೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಮುಸ್ಲಿಂ ಸಮುದಾಯದ ವತಿಯಿಂದ ಏರ್ಪಡಿಸಿದ್ದ ಶಾಸಕರ ಸಂಸದರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು
ಬಳ್ಳಾರಿ ನಗರದ 21 ಮಸೀದಿಗಳಿಗೆ 2.20 ಕೋಟಿ ರೂ.ಗಳ ಅನುದಾನ ತಂದಿರುವೆ. ಅದೇ ರೀತಿ ಎರಡು ಶಾದಿ ಮಹಲ್’ಗಳಿಗೆ 3 ಕೋಟಿ ರೂ.ಗಳ ಅನುದಾನ ತಂದಿರುವೆ. ಚುನಾವಣೆಯ ಸಂದರ್ಭದಲ್ಲಿ ಶಾದಿ ಮಹಲ್ ಬಗ್ಗೆ ಪ್ರಸ್ತಾಪ ಮಾಡಿದಾಗ ಅದು ಆಗದ ಕೆಲಸ ಎಂದು ವೃದ್ಧೆಯೊಬ್ಬರು ಹೇಳಿದ್ದರು ಆದರೆ ಇಂದು ಒಂದು ಶಾದಿ ಮಹಲ್ ಅಲ್ಲ ಎರಡು ಶಾದಿ ಮಹಲ್’ಗಳಿಗೆ ಅನುದಾನ ತಂದಿರುವೆ ಎಂದರು.
ವಕ್ಫ್ ಮಂಡಳಿಯ ಆಸ್ತಿ ಅದು ದೇವರಿಗೆ ಸೇರಿದ್ದು, ಅದರ ರಕ್ಷಣೆ ನಮ್ಮ ಹೊಣೆಯಾಗಿದೆ, ಬಳ್ಳಾರಿ ನಗರದ ಹಾವಂಭಾವಿಯಲ್ಲಿ ಕೆಲವರು ಒತ್ತುವರಿ ಮಾಡಿದ್ದರು, ಆದರೆ ನಾವು ನ್ಯಾಯಾಲಯದ ಮೊರೆ ಹೋಗಿ ಆಸ್ತಿಯನ್ನು ರಕ್ಷಣೆ ಮಾಡಿದ್ದೇವೆ ಎಂದರು. ನನ್ನ ತಂದೆ ತಾಯಿಯ ಪುಣ್ಯ, ಅಲ್ಲಾಹನ ಕೃಪೆಯಿಂದಾಗಿ ನಾನು ಶಾಸಕನಾದೆ ಎಂದರು.
Share