0Shares
Post Views: 20
BMRCL ಬೆಂಗಳೂರು: ನಮ್ಮ ಮೆಟ್ರೋ ರೈಲು ಪ್ರಯಾಣ ದರ ಏರಿಕೆಗೆ ಪ್ರಯಾಣಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆಯೇ ಈ ಬಗ್ಗೆ ಬಿಎಂಆರ್ ಸಿಎಲ್ ಸ್ಪಷ್ಟನೆ ನೀಡಿದೆ. ಮೆಟ್ರೋ ರೈಲು ಪ್ರಯಾಣದರ ಶೇ.46 ರಷ್ಟು ಏರಿಕೆಯಾಗಿದ್ದು, ಪ್ರಯಾಣ ದರ ಕನಿಷ್ಠ 10 ರೂ.ನಿಂದ 90 ರೂ.ವರೆಗೆ ಏರಿಕೆ ಮಾಡಲಾಗಿದೆ. ಮೆಟ್ರೋ ಪ್ರಯಾಣದ ಗರಿಷ್ಠ ದರ 60ರೂ ನಿಂದ 90ರೂಗೆ ಏರಿಕೆಯಾಗಿದೆ. 30 ಕಿ.ಮೀ ಹೆಚ್ಚಿನ ಪ್ರಯಾಣ ಇದ್ದರೆ 90 ರೂಪಾಯಿ ಆಗಿದೆ. ಇನ್ನು ನಮ್ಮ ಮೆಟ್ರೋದ ಸ್ಮಾರ್ಟ್ ಕಾರ್ಡ್ ಮಿತಿಯನ್ನು ಹೆಚ್ಚಳ ಮಾಡಲಾಗಿದೆ. ಈ ಹಿಂದೆಯಿಂದ 50 ರೂಪಾಯಿ ಮಿತಿಯನ್ನು 90 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ದರ ಏರಿಕೆ ವಿಚಾರವಾಗಿ ಸ್ಪಷ್ಟನೆ ನೀಡಿರುವ ಬಿಎಂಆರ್ ಸಿಎಲ್ ಅಧಿಕಾರಿಗಳು ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದು, ಮೆಟ್ರೋ ಪ್ರಯಾಣ ಬೆಲೆಯನ್ನು ಹಲವು ವರ್ಷಗಳಿಂದ ಮಾಡಿಲ್ಲ. ಹೀಗಾಗಿ ಇದರ ಬೆಲೆ ಹೆಚ್ಚಳ ಮಾಡುವುದು ಅನಿವಾರ್ಯವಾಗಿತ್ತು. ಬೆಂಗಳೂರಿನಲ್ಲಿ ಪ್ರಯಾಣಿಸಲು ಆಟೋಗಳು ಅಥವಾ ಟ್ಯಾಕ್ಸಿಗಳಿಗಿಂತ ಅಗ್ಗವಾಗಿದೆ ಎಂದು ಹೇಳಿದ್ದಾರೆ. 2 ಕಿ.ಮೀ ದೂರಕ್ಕೆ ಮೆಟ್ರೋ ಪ್ರಯಾಣಕ್ಕೆ ಕೇವಲ 10 ರೂ. ವೆಚ್ಚವಾಗುತ್ತದೆ, ಆದರೆ ಆಟೋದಲ್ಲಿ ಅದೇ ದೂರಕ್ಕೆ 30 ರೂ. ಮತ್ತು ಟ್ಯಾಕ್ಸಿಯಲ್ಲಿ 100 ರೂ. ಇದೆ. 25-30 ಕಿ.ಮೀ ದೂರಕ್ಕೆ, ಮೆಟ್ರೋ ಈಗ 90 ರೂ. ವಿಧಿಸುತ್ತದೆ, ಆದರೆ ಆಟೋ ದರ 390 ರಿಂದ 450 ರೂ.ಗೆ ಬರುತ್ತದೆ ಮತ್ತು ಟ್ಯಾಕ್ಸಿಗಳು 676 ರಿಂದ 748 ರೂ.ವರೆಗೆ ವಿಧಿಸುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಿಎಂಟಿಸಿ ಎಸಿ ಬಸ್‌ನಲ್ಲಿ ಕನಿಷ್ಠ ದೂರ ದರ 15 ರೂ.ಗೆ ತಲುಪಿದ್ದರೆ, 25 ಕಿ.ಮೀ ಗಿಂತ ಹೆಚ್ಚು ದೂರಕ್ಕೆ 50 ರೂ. ವಿಧಿಸಲಾಗಿದೆ. ಎಸಿ ಅಲ್ಲದ ಬಸ್ ದರ ಅತ್ಯಂತ ಅಗ್ಗವಾಗಿದ್ದು, ಕನಿಷ್ಠ ದರ 26 ಕಿ.ಮೀ ಗಿಂತ ಹೆಚ್ಚಾಗಿದೆ. ಈ ಎಲ್ಲ ಅಂಕಿಅಂಶಗಳನ್ನು ಪರಿಶೀಲಿಸದರೆ ಈಗಲೂ ಮೆಟ್ರೋ ಪ್ರಯಾಣದರ ಅಗ್ಗವಾಗಿದೆ ಎಂದು ಹೇಳಿದ್ದಾರೆ.
Show less
0Shares