0Shares
Post Views: 27
ಈಶಾನ್ಯ ಗಡಿ ರೈಲ್ವೆ ವಲಯವು ದೇಶದಾದ್ಯಂತ ನಿವೃತ್ತ ಸಿಬ್ಬಂದಿಗಳನ್ನು ಅಗತ್ಯ ವಿಭಾಗಗಳಲ್ಲಿ, ವಿವಿಧ ಹುದ್ದೆಗಳಿಗೆ ನೇಮಕ ಮಾಡಲು ಎಂಪ್ಲಾಯ್ಮೆಂಟ್ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ನಿವೃತ್ತಿ ಹೊಂದಿದ ನಾನ್ ಗೆಜೆಟೆಡ್ ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದಲ್ಲಿ, ಪುನರ್ ನಿಯೋಜಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿರುವುದು. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ದೇಶದ ನಿವೃತ್ತ ಸಿಬ್ಬಂದಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ ಕೆಳಗಿನಂತಿದೆ. ನೇಮಕಾತಿ ಪ್ರಾಧಿಕಾರ: ಈಶಾನ್ಯ ಗಡಿ ರೈಲ್ವೆ ಹುದ್ದೆಗಳ ಹೆಸರು: ನಿವೃತ್ತ ಸಿಬ್ಬಂದಿಗಳು ಒಟ್ಟು ಹುದ್ದೆ ಸಂಖ್ಯೆ: 1856 ಅರ್ಹತಾ ಮಾನದಂಡಗಳು ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ನಿವೃತ್ತ ಸರ್ಕಾರಿ ಸಿಬ್ಬಂದಿಗಳಾಗಿರಬೇಕು. ಪೇ ಲೆವೆಲ್ 1 ರಿಂದ ಪೇ ಲೆವೆಲ್ 9 ರವರೆಗಿನ ನಿವೃತ್ತ ಸಿಬ್ಬಂದಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಗರಿಷ್ಠ 65 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗಲಿದೆ. ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇರಲಿದೆ. ಪ್ರಮುಖ ದಿನಾಂಕಗಳು ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 07-02-2025 ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 28-02-2025 ಅರ್ಜಿ ಸಲ್ಲಿಸುವ ವಿಧಾನ – ಈಶಾನ್ಯ ರೈಲ್ವೆಯ ಆರ್‌ಆರ್‌ಸಿ ವೆಬ್‌ಸೈಟ್ https://retiredstaff-reengage.nfreis…. ಗೆ ಭೇಟಿ ನೀಡಿ.
0Shares