ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ಉತ್ತಮವಾದ ಹಣ್ಣುಗಳಲ್ಲಿ ಒಂದು. ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಕಡಿಮೆ ಆಯಾಸ, ದೇಹದಲ್ಲಿನ ಉಷ್ಣತೆ ನಿಯಂತ್ರಣ, ಚರ್ಮದ ಕಾಂತಿ, ದೇಹದ ತೂಕ ಕಡಿಮೆ ಮಾಡುವಂತಹ ಹಲವು ಪ್ರಯೋಜನಕಾರಿ ಅಂಶಗಳಿವೆ.
ಚರ್ಮದ ಆರೋಗ್ಯಕ್ಕೆ ಉತ್ತಮ: ಕಲ್ಲಂಗಡಿ ಹಣ್ಣು ದೇಹದ ಉಷ್ಣತೆ ನಿಯಂತ್ರಿಸುವುದರ ಜೊತೆಗೆ ಅದರಲ್ಲಿರುವ ತಂಪಿನ ಅಂಶ ನಿಮ್ಮ ಚರ್ಮವನ್ನು ಕಾಪಾಡುತ್ತದೆ. ಸೂರ್ಯನ ಶಾಖದಿಂದ ಚರ್ಮಕ್ಕೆ ಹಾನಿಯಾಗದಂತೆ ತಡೆಯುತ್ತದೆ. ಹಣ್ಣಿನಲ್ಲಿರುವ ವಿಟಮಿನ್ ಎ, ವಿಟಮಿನ್ ಸಿ ಚರ್ಮದ ಆರೋಗ್ಯಕ್ಕೆ ಉತ್ತಮ. ಸನ್‌ಬರ್ನ್‌ನಿಂದ ಕಾಪಾಡಲು ಸಹಾಯ ಮಾಡುತ್ತದೆ. ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಚರ್ಮ ಮೃದುವಾಗಿ, ಕಾಂತಿಯುತವಾಗುತ್ತದೆ. ಹಾಗೇ ಒಣ ತ್ವಚೆಯ ಸಮಸ್ಯೆ ದೂರಗೊಳಿಸುತ್ತದೆ.
ಹೃದಯದ ಆರೋಗ್ಯ: ಕಲ್ಲಂಗಡಿ ಸಿಟ್ರುಲಿನ್ ಎಂಬ ಅಮೈನೋ ಆಮ್ಲದಿಂದ ದೇಹದಲ್ಲಿ ಉತ್ತಮ ರಕ್ತಚಲನೆಗೆ ಸಹಕಾರಿಯಾಗುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡಿ, ಹೃದಯಾಘಾತದ ಅಪಾಯದಿಂದ ದೂರವಿರುವಂತೆ ಮಾಡುತ್ತದೆ.
ಕೀಲುಗಳ ರಕ್ಷಣೆ: ಕಲ್ಲಂಗಡಿ ಬೀಟಾ-ಕ್ರಿಪ್ಟೋಕ್ಸಾಂಥಿನ್ ಎಂಬ ನೈಸರ್ಗಿಕ ವರ್ಣದ್ರವ್ಯ ನಿಮ್ಮ ಕೀಲುಗಳನ್ನು ಉರಿಯೂತದಿಂದ ರಕ್ಷಿಸುತ್ತದೆ. ಸಂಧಿವಾತ, ಕೀಲುನೋವುಗಳ ಬಾಧೆಯನ್ನು ಕಡಿಮೆ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ.
Share