ಬೆಂಗಳೂರು: ಮೋದಿ ಪಾಕಿಸ್ತಾನಕ್ಕೆ ಹೋಗಿದ್ದು ಬಿರಿಯಾನಿ ತಿನ್ನೋಕಾ ಎಂದು ಪ್ರಿಯಾಂಕ್ ಖರ್ಗೆ ಬಿಜೆಪಿಗರಿಗೆ ತಿರುಗೇಟು ಕೊಟ್ಟಿದ್ದಾರೆ.
ವಿಧಾನಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಚೀನಾದ ಚಮಚಗಳು, ಪಾಕಿಸ್ತಾನದ ಏಜೆಂಟರು ಎಂಬ ಸುನಿಲ್ ಕುಮಾರ್ ಹೇಳಿಕೆಗೆ, ನವಾಜ್ ಷರೀಫ್ ಜೊತೆ ಮೋದಿ ಇರುವ ಫೋಟೋ ತೋರಿಸಿ ಪ್ರಿಯಾಂಕ್ ಖರ್ಗೆ ಟಕ್ಕರ್ ಕೊಟ್ಟಿದ್ದಾರೆ.
ಮೋದಿ ಪಾಕಿಸ್ತಾನದಲ್ಲಿ ನವಾಜ್ ಷರೀಫ್ ಅವರ ಮನೆಗೆ ಹೋಗಿದ್ದ ಸಂದರ್ಭ ತೆಗೆದಿದ್ದ ಫೋಟೋವನ್ನು ಸದನದಲ್ಲಿ ತೋರಿಸಿದ ಪ್ರಿಯಾಂಕ್ ಖರ್ಗೆ, ಕರೆಯದೇ ಪಾಕಿಸ್ತಾನಕ್ಕೆ ಹೋದ ಮೊದಲ ಪ್ರಧಾನಮಂತ್ರಿ ಮೋದಿ. ಪುಕ್ಸಟ್ಟೆ ಬಿರಿಯಾನಿ ತಿನ್ನೋದಕ್ಕೆ ಹೋದ ಮೊದಲ ಪ್ರಧಾನಿ ಇವರು. ಹಾಗಿದ್ರೆ ನೀವೆಲ್ಲಾ ಪಾಕಿಸ್ತಾನದ ಚಮಚಾಗಳ? ನೀವು ನಮಗೆ ದೇಶಭಕ್ತಿಯ ಪಾಠ ಹೇಳೋಕೆ ಬರುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಗದ್ದಲ, ಕೋಲಾಹಲ ಉಂಟಾಯಿತು.
Share