ಗದಗ: ರೋಣ ಮತ ಕ್ಷೇತ್ರದ ಶಾಸಕ ಜಿ ಎಸ್ ಪಾಟೀಲ ಅವರ 78 ನೇ ಹುಟ್ಟಿದ ಹಬ್ಬವನ್ನು ರೋಣ,ಗಜೇಂದ್ರಗಡ,ಡಂಬಳ,ಮುಂಡರಗಿ,ಗದಗ ಸೇರಿದಂತೆ ಜಿಲ್ಲೆಯ ವಿವಿಧೆಡೆ ಅದ್ದೂರಿಯಾಗಿ ಸಮಾಜಮುಖಿ ಕೆಲಸ ಮಾಡುವುದರ ಮೂಲಕ ತಮ್ಮ ನೆಚ್ಚಿನ ಶಾಸಕರ ಜನ್ಮದಿನವನ್ನು ಅಭಿಮಾನಿಗಳು ಆಚರಿಸಿದರು.
ಜಿ ಎಸ್ ಪಾಟೀಲರ 78 ನೇ ಹುಟ್ಟು ಹಬ್ಬ ಅಂಗವಾಗಿ ಶಾಸಕರಿಗೆ ಶುಭಾಶಯ ಕೋರಲು ಅಭಿಮಾನಿಗಳು ಹಾಗು ಕಾರ್ಯಕರ್ತರು ಮುಂಜಾನೆಯಿಂದಲೇ ಹೂವಿನ ಮಾಲೆ ಕೇಕ್ ತಂದು ಶಾಸಕರಿಗೆ ಶುಭಾಶಯ ಕೋರುತ್ತಿದ್ದು ಗಜೇಂದ್ರಗಡ, ರೋಣ ಸುತ್ತಲಿನ ಸ್ಥಳೀಯ ದೇವಸ್ಥಾನಗಳಲ್ಲಿ ಜಿ ಎಸ್ ಪಾಟೀಲರ ಹೆಸರಿಗೆ ಅಭಿಷೇಕ ಮಾಡಿಸಿ ದೇವರು ನೆಚ್ಚಿನ ಶಾಸಕರಿಗೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸಮಾಜಮುಖಿ ಕೆಲಸ ಮಾಡಲು ಶಕ್ತಿ ನೀಡಲಿ ದೇವರಲ್ಲಿ ಬೇಡಿಕೊಳ್ಳುವ ಮೂಲಕ ಶುಭ ಹಾರೈಸಿದರು.
ರೋಣದಲ್ಲಿ ಪಟ್ಟಣದಲ್ಲಿ ಹಾಲು ಬ್ರೇಡ್ ವಿತರಣೆ:
ಇನ್ನೂ ರೋಣ ಗಜೇಂದ್ರಗಡ ಪಟ್ಟಣದಲ್ಲಿ ವೀರಯ್ಯ ಸೋಮನಕಟ್ಟಿಮಠ ನೇತೃತ್ವದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ರೋಗಿಗಳಿಗೆ ಹಾಲು ಬ್ರೇಡ್ ಬಿಸ್ಕಿಟ್ ಪಾಕೇಟುಗಳನ್ನು ವಿತರಿಸಿದರು.
ಸುರಭಿ ವೃದ್ರಾಶ್ರಮದಲ್ಲಿ ಅಭಿಮಾನಿಯೊಬ್ಬರು ಹುಟ್ಟು ಹಬ್ಬ ಆಚರಣೆ:
ಹುಟ್ಟು ಹಬ್ಬದ ವಿಶೇಷ ಎಂಬತೆ ಗದಗ ನಗರದ ಮುನ್ನಾ ಕಲ್ಮನಿ ಹುಲಕೋಟಿ ಗ್ರಾಮದ ಸುರಭಿ ವೃದ್ಧಾಶ್ರಮದಲ್ಲಿ ಇರುವ ವೃದ್ಧರಿಗೆ ಮಧ್ಯಾನ್ಹದ ಸಿಹಿ ತಿನಿಸು ಉಪಹಾರದ ಸೇವೆ ಮಾಡಿ ಸಂಜೆ ಶಾಸಕರ ಹೆಸರಿನಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಿ ಅಲ್ಲಿರುವ ವಯಸ್ಸಾದ ವೃದ್ಧರೊಂದಿಗೆ ವಿಶೇಷವಾಗಿ ಹುಟ್ಟು ಹಬ್ಬ ಆಚರಿಸಿದರು.
ಇನ್ನು ಇವರೊಂದಿಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಗದಗ ,ಬಸಲಿಂಗಪ್ಪ ಮುಂಡರಗಿ ಅಧ್ಯಕ್ಷರು, ಎನ್ ಆರ್ ದೇವಾಂಗ ಮಠ ಉಪಾಧ್ಯಕ್ಷರು,ವೆಂಕಪ್ಪ ಕಲಹಾಳ, ಬೆಟ್ಟಪ್ಪ ಕುಂಬಾರ,ನಿಂಗಪ್ಪ ಚೋರಗಸ್ತಿ ,ವಿರುಪಾಕ್ಷಪ್ಪ ರಾಮೇನಹಳ್ಳಿ, ಮಡಿವಾಳಯ್ಯ ಕುರ್ತಕೋಟಿಮಠ,ಚಂದ್ರಶೇಖರಪ್ಪ ಬಿಳೆಯಲಿ ಸೇರಿದಂತೆ ಶಾಸಕರ ಆಪ್ತರಾದ ವೀರಯ್ಯ ಸೋಮನಕಟ್ಟಿಮಠ,ಸಂಜಯ ಆರ್ ದೊಡ್ಡಮನಿ ಆಯೋಜಕರಾದ ಮುನ್ನಾ ಕಲ್ಮನಿ ಸೇರಿದಂತೆ ಇತರರು ಹಾಜರಿದ್ದರು.
ಸರ್ಕಾರಿ ಶಾಲೆಯಲ್ಲಿ ಸಸಿ ನೆಡುವ ಮೂಲಕ ಆಚರಣೆ:
ಇನ್ನು ಮತ ಕ್ಷೇತ್ರದ ವಿವಿಧೆಡೆ ಸರ್ಕಾರಿ ಶಾಲಾ ಆವರಣದಲ್ಲಿ ಸಸಿ ನೆಡುವುದರ ಮೂಲಕ ಹುಟ್ಟು ಹಬ್ಬ ಆಚರಿಸಿದರು.
ರೋಣ ನಗರದ ರಾಜೀವಗಾಂಧಿ ಸಂಸ್ಥೆ ಆವರಣದಲ್ಲಿ ಅಭಿಮಾನಿಗಳಿಗೆ ಹಾಗೂ ಕಾರ್ಯಕರ್ತರಿಗೆ ವಿಶೇಷವಾದ ಸಿಹಿ ತಿನಿಸಿನ ಊಟದ ವ್ಯವಸ್ಥೆಯನ್ನು ಮಾಡಲಾಯಿತು.
ಕ್ಷೇತ್ರದ ಸಾವಿರಾರು ಮಂದಿ ನಮ್ಮ ನೆಚ್ಚಿನ ನಾಯಕನಿಗೆ ಶುಭಾಶಯ ಕೋರಿದರು.
ಹುಟ್ಟುಹಬ್ಬದ ಆಚರಣೆ ಮಾಡಿಕೊಂಡು ಮಾತನಾಡಿದ ಶಾಸಕ ಜಿ ಎಸ್ ಪಾಟೀಲ ಅವರು ನಿಮ್ಮ ಪ್ರೀತಿ ಅಭಿಮಾನಕ್ಕೆ ಚಿರರುಣಿ ಎಂದು ತಿಳಿಸಿದರು.
Share